Dalit organizing led by REDS has taken on big land sharks.


ತುಮಕೂರಿನ ಬೋಗಸ್ ಅಭಿವೃದ್ದಿ ಹರಿಕಾರರಾದ ಕುಂದರನಹಳ್ಳಿ ರಾಮೇಶ ರವರಿಗೆ ಗೂಸ

ತುಮಕೂರಿನ ಎಂ.ಪಿ ಬಸವರಾಜು ರವರ ಮುಂದೆ ಹೆಬ್ಬೂರಿನ ಬಿ.ಜೆ.ಪಿ ದುರೀಣರೊಬ್ಬರು, ಕುಂದರನಹಳ್ಳಿ ಮೈಕೈಯಿಗೆ ಎಲ್ಲಾ ಚೆನ್ನಾಗಿ ಗೂಸ ಕೊಟ್ಟಿದ್ದಾರೆ ಎನ್ನಲಾಗಿದೆ. ಗೂಸ ತಿಂದು ಮೂರು ದಿನ ಆಗಿದೆ. ಕಾಂಗ್ರೆಸ್ ನಲ್ಲಿ ಇದ್ದು ಬಿ.ಜೆ.ಪಿ ಯಲ್ಲಿ ರಾಜಕಾರಣ ಮಾಡುವ ವ್ಯಕ್ತಿಗಳಿಗೆ ಬಹಳ ಹೆಚ್ಚಿನ ಸನ್ಮಾನವೇ ಜರುಗಿದೆ ಎಂಬ ದಟ್ಟ ಹೊಗೆ ತುಮಕೂರು ಪತ್ರಕರ್ತರ ವಲಯದಲ್ಲಿ ಹರಡಿದೆ ಅದಕ್ಕೆ ಕುಂದ ಏನು ಉವಾಚ ನೋಡೋಣ.

ತುಮಕೂರು ಸಮಸ್ಯೆಗಳ ಒಂದು ಚಿಂತನೆ

೧. ವಿಧ್ಯಾವಂತ ವಿಧಾನಸಭಾ ಸದಸ್ಯರ ಕೊರತೆಯಿಂದಾಗಿ ತುಮಕೂರು ನಗರ ಅಭಿವೃದ್ದಿ ಕೆಲಸಗಳಲ್ಲಿ ಒಂದಲ್ಲಾ ಒಂದು ಕಾರಾಣಕ್ಕೆ ವಿಳಂಬವಾಗುತ್ತಾ ಬಂದಿದೆ.

೨. ಅಧಿಕಾರಿಗಳು ತಮಗೆ ತೋಚಿದ್ದನ್ನು ಮಾಡಿಸುವ, ರಾಜಕಾರಣಿಗಳು ಅವರಿಗೆ ತೋಚಿದ್ದನ್ನು ಕಾನೂನು ಭಾಹಿರವಾಗಿದ್ದರೂ ಅಧಿಕಾರಿಗಳಿಂದ ಮಾಡಿಸುವ ಪರಿಪಾಠ ಹೆಚ್ಚಾಗಿದೆ.


೩. ವಿಧ್ಯಾವಂತ ನಿರುದ್ಯೋಗಿಗಳನ್ನು ರಾಜಕಾರಣಕ್ಕೆ ದುರ್ಬಳಕೆ ಮಾಡಿ ಕೊಳ್ಳುವುದು, ನಿರುದ್ಯೋಗಿ ಅವಿಧ್ಯಾ ವಂತರನ್ನು ರೌಡಿಪಡೆಗಳಾಗಿ ಸಲಹುವುದು ಹೆಚ್ಚುತ್ತಿದೆ.

೪. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಲ್ಲಿ ಸತ್ಯ ನಿಷ್ಠೆಯಿಂದ ಎಲ್ಲರ ಏಳಿಗೆಯ ಕೆಲಸಕ್ಕೆ ವಿನಿಯೋಗಿಸುವುದು ಬಿಟ್ಟು ಬೇಕಾಬಿಟ್ಟಿ ವ್ಯಯ ಮಾಡಲಾಗುತ್ತಿದೆ. ಇದು ತೆರಿಗೆದಾರರ ಹಣ ಎಂದು ಕೆಲವು ಶಾಸಕರುಗಳು ತಾಮ್ಮ ದುಡ್ಡೇನೋ ಎನ್ನುವ ರೀತಿಯಲ್ಲಿ ಕೆಲಸಕ್ಕೆ ಬಾರದ ಯೋಜನೆಗಳಿಗೆ ಮತ್ತು ಕೆಲಸವೇ ಮಾಡದ ಯೋಜನೆಗಳಿಗೆ ವಿನಿಯೋಗ ಮಾಡುತ್ತಿರುವುದು ಕಂಡು ಬರುತ್ತದೆ.


೫. ಸಂಸದರ ನಿಧಿಯಲ್ಲಿಯೂ ಒಂದು ಭಾಗಕ್ಕೆ ಅನ್ಯಾಯ ಮಾಡಿ ಇನ್ನೊಂದು ಭಾಗದ ಜನರಿಗಷ್ಟೇ ಸೀಮಿತವಾಗುವ ರೀತಿಯಲ್ಲಿ ಮತ್ತು ಕೆಲವು ಜಾತಿಗಷ್ಟೇ ಸೀಮಿತವಾಗುವ ರೀತಿಯಲ್ಲಿ ವ್ಯಯ ಮಾಡಲಾಗಿದೆ. ಅಲ್ಪ ಸಂಖ್ಯಾತಾರು, ಹಿಂದುಳಿದ ವರ್ಗಗಳು, ಪರಿಷಿಷ್ಟರು ಅನ್ಯಾಯಕ್ಕೆ ಒಳಗಾಗಿದ್ದಾರೆ.

೬. ಅಭಿವೃದ್ದಿ ಕಾಮಗಾರಿಗಾಳಿಗೆ ಹಣದ ಗ್ರಾಂಟು ಮತ್ತು ಸಾಲ ತರುವುದು ಕಾಮಗಾರಿಗಳನ್ನು ತಮ್ಮ ಹತ್ತಿರದ ಕಾಂಟ್ರಾಕ್ಟ್ ದಾರರಿಗೆ ನೀಡುವುದು, ಸದರಿ ಕಾಮಗಾರಿಯಲ್ಲಿ ಆವ್ಯವಹಾರ ಮಾಡಿ ಕಾಮಗಾರಿಯ ಗುಣಮಟ್ಟ ಕಾಯದಿರುವುದು ಮಾಡಲಾಗುತ್ತಿದೆ ಈ ಬಗ್ಗೆ ಸದರಿ ಪ್ರವೃತ್ತಿಗಳನ್ನು ತಡೆಯಲು ಸಮಗ್ರ ನೀತಿ, ನಿಯಮಾವಳಿ ಮತ್ತು ಪಾರದರ್ಶಕತೆ ಉದಯವಾಗಬೇಕಿದೆ.


೭. ಅನೇಕ ಸರ್ಕಾರಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರೆಯದೆ ಮಾಧ್ಯವರ್ತಿಗಳ ಮತ್ತು ಬ್ರಷ್ಟರ ಪಾಲಾಗುತ್ತಿದೆ. ಈ ಬಗ್ಗೆ ಸರ್ಕಾರಿ ಅನುದಾನ ಪಡೆಯುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಪೂರ್ಣ ಮೌಲ್ಯ ಮಾಪನ ತುಮಕೂರಿನಲ್ಲಿ ನಡೆಯಬೇಕಿದೆ.

೮. ತುಮಕೂರು ನಗರದಲ್ಲಿ ಆಸ್ತಿ ತೆರಿಗೆ ಸಮರ್ಪಕವಾಗಿ ವಸೂಲಾಗಬೇಕಿದ್ದರೆ ಮೊದಲು ನಗರಸಭೆಂii ಸೇವೆಗಳನ್ನು ಸುಧಾರಿಸಬೇಕು ಮತ್ತು ನಾಗರೀಕರಿಗೆ ಕನಿಷ್ಟ ಸೌಲಭ್ಯಗಳನ್ನು ನೀಡಬೇಕು.
೯. ತುಮಕೂರಿನ ಸರ್ಕಾರಿ ಜಮೀನುಗಳನ್ನು ಗುರುತಿಸಿ ಎಲ್ಲಾ ಕಡೆಯಲ್ಲಿ ಸರ್ಕಾರದಿಂದ ಸದರಿ ಮಾಹಿತಿಯನ್ನು ಜನತೆಗೆ ತಲುಪುವ ರೀತಿಯಲ್ಲಿ ಪ್ರದರ್ಶನವಾಗಬೇಕು.

೧೦. ತುಮಕೂರಿನ ಅಂತರ್ ಜಲ ವೃದ್ದಿಗಾಗಿ ಎಲ್ಲಾ ಕೆರೆ ಅಂಗಳಗಳನ್ನು ಸಂರಕ್ಷಿಸಿ ರಾಯಗಾಲುವೆಯ ಒತ್ತುವರಿಯನ್ನು ತೆರವುಗೊಳಿಸಿ, ಕೆರೆಗಳಿಗೆ ಒಳಹರಿವು ನೀರನ್ನು ಪುನರುಜ್ಜೀವನ ಗೊಳಿಸಬೇಕು.


೧೧. ತುಮಕೂರಿನ ಘನ ತ್ಯಾಜ್ಯ ವಸ್ತು ವಿಲೇವಾರಿಗಾಗಿ ನಗರದ ಅಷ್ಟದಿಕ್ಕುಗಳಲ್ಲಿ ತಲಾ ೫ ಎಕರೆ ಪ್ರದೇಶದಂತೆ ಸರ್ಕಾರಿ ಜಾಗವನ್ನು ಗುರುತಿಸಿ, ಅಂತರ್ ಜಲ ಕಲುಷಿತವಾಗದ ರೀತಿಯಲ್ಲಿ ಪರಿಸರವನ್ನು ಉತ್ತಮವಾಗಿಟ್ಟು ಕಾರ್ಯ ಯೋಜನೆ ರೂಪಿಸಬೇಕು.

೧೨. ತುಮಕೂರಿನ ಅಷ್ಟದಿಕ್ಕುಗಳಲ್ಲಿ ಸಂತೆ ವ್ಯಾಪಾರಿ ಮೈಧಾನಗಳನ್ನು ಗುರುತಿಸಿ ರಸ್ತೆ ಬಧಿ ವ್ಯಾಪಾರಿಗಳಿಗೆ ಮತ್ತು ರೈತರಿಗೆ ಮತ್ತು ಸಣ್ಣ ಉದ್ದಿಮೆದಾರರಿಗೆ ನೇರ ಮಾರುಕಟ್ಟೆ ಸೌಲಭ್ಯ ಒದಗಿಸುವುದು, ಸದರಿ ಪ್ರದೇಶದಲ್ಲಿ ಪ್ರತೀದಿನ ಅಗತ್ಯ ವಸ್ತುಗಳ ಮಾರಾಟ ಮತ್ತು ವಾರಕ್ಕೊಂದು ದಿನ ಮೇಳದ ರೀತಿಯಲ್ಲಿ ಆಯೋಜಿಸುವುದು.


೧೩. ರಸ್ತೆ ಬದಿಯಲ್ಲಿರುವ ಫ಼ುಟ್ ಪಾತಿನ ಮಣ್ಣಿನ ಅಂಶವು ರಸ್ತೆಗೆ ಹರಡಿ ವಾಹನ ಸಂಚಾರದಿಂದ ರಸ್ತೆ ತುಂಬೆಲ್ಲಾ ದೂಳಿನ ಕಣಗಳು ಎದ್ದು ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆ ತಲೆ ದೋರಿದೆ ಈ ಬಗ್ಗೆ ಇಲ್ಲಿವರೆಗೆ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಆಲೋಚಿಸದಿರುವುದು ಒಂದು ಶೋಚನೀಯ ಸಂಗತಿಯಾಗಿದೆ. ಈ ಬಗ್ಗೆ ತಾಂತ್ರಿಕ ಅಧ್ಯಯನ ಅವಶ್ಯಕತೆ ನಮ್ಮ ತುಮಕೂರಿಗಿದೆ.

೧೪. ಈಗ ನಿರ್ಮಾಣ ಹಂತದಲ್ಲಿ ಇರುವ ನಗರದ ಅಶೋಕ ರಸ್ತೆಯ ಖಾಸಗಿ ಬಸ್ ನಿಲ್ದಾಣ ಮತ್ತು ವಾಣಿಜ್ಯ ಕಟ್ಟಡವನ್ನು, ವಾಣಿಜ್ಯ ಕಟ್ಟಡವನ್ನಾಗಿ ಮಾತ್ರ ಉಪಯೋಗಿಸ ಬೇಕು ಮತ್ತು ಸದರಿ ಜಾಗದ ಹಿಂದೆ ಇರುವ ಸರ್ಕಾರಿ ಗೌರ್ಮೆಂಟ್ ಬಸ್ ಡಿಪೋ ಅನ್ನು ಖಾಸಗಿ ಬಸ್ ನಿಲ್ದಾಣವನ್ನಾಗಿ ಪರಿವರ್ತಿಸುವುದು ಆಗಬೇಕಿದೆ.


೧೫. ತುಮಕೂರಿನ ಸುತ್ತ ಇರುವ ಸರ್ಕಾರಿ ಜಮೀನಿನಲ್ಲಿ ಸುಮಾರು ನೂರು ಎಕರೆ ಪ್ರದೇಶದಲ್ಲಿ ಸ್ಮಶಾನದ ಉದ್ದೇಶಕ್ಕೆ ಮೀಸಲಿಟ್ಟು ಮುಂದೆ ಅಂತ್ಯಕ್ರಿಯೆಗೂ ಬೆಂಗಳೂರಿನಲ್ಲಿ ಆಗುತ್ತಿರುವ ತೊಂದರೆ ಇಲ್ಲಿ ಆಗದಂತೆ ತಡೆಯುವ ಕ್ರಿಯಾ ಯೋಜನೆ ಸಿದ್ದಗೊಳ್ಳಬೇಕಿದೆ. ಸದರಿ ಪ್ರದೇಶದಲ್ಲಿ ಗೋರಿಗಳಿಗೆ ಅವಕಾಶ ನೀಡದೆ ಒಂದು ಕಡೆಯಿಂದ ವ್ಯವಾಸ್ಥಿತವಾಗಿ ದಫ಼ನ್ ಮಾಡುವ ಯೋಜನೆ ಸಿದ್ದಗೊಳ್ಳಬೇಕಿದೆ.

೧೬. ಸಾರ್ವಜನಿಕ ಆರೋಗ್ಯಕ್ಕೆ ಮಾರಕ ವಾಗಿರುವ ಸೊಳ್ಳೆ ನಿಯಂತ್ರಣ ಮತ್ತು ಸ್ವಚ್ಚತೆ ವಿಚಾರದಲ್ಲಿ ಹೆಚ್ಚಿನ ಗಮನ ಸಧ್ಯದ ಪರಿಸ್ಥಿತಿಯಲ್ಲಿ ಎದ್ದು ಕಾಣುತ್ತಿದೆ.


೧೭. ತುಮಕೂರಿನಲ್ಲಿ ಮಾಂಸ ಮಾರಾಟದ ಮಳಿಗೆಗಳನ್ನು ನಾಲ್ಕು ದಿಕ್ಕುಗಳಲ್ಲಿ ನಿರ್ಧಿಷ್ಟ ಸುಸಜ್ಜಿತ ಜಾಗಕ್ಕೆ ಸ್ಥಳಾಂತರಿಸುವ ಅವಶ್ಯಕತೆ ಇದೆ.

೧೮. ಪೋಲೀಸ್ ವಲಯದಲ್ಲಿ ದೂರು ಸ್ವೀಕರಣಾ ಕೇಂದ್ರವನ್ನು ಟಪಾಲು ವಹಿಯಂತೆ ನಿರ್ವಹಿಸುವ ಕಾರ್ಯ ಜಾರಿಗೊಳ್ಳಬೇಕಿರುತ್ತದೆ ಮತ್ತು ದೂರು ನೊಂದಾಯಿಸುವುವ ಪ್ರಕ್ರಿಯೆ ಮತ್ತು ದೂರು ವಿಚಾರಣಾ ಪ್ರಕ್ರಿಯೆ ಬೇರೆಯವರು ನಡೆಸಬೇಕಾದ ಶಿಸ್ತು ಜಾರಿಯಾಗಬೇಕಿರುತ್ತದೆ.


೧೯. ವರಧಕ್ಷಿಣೆ ಹಿಂಸೆ ಮತ್ತು ಕೌಟುಂಬಿಕ ವಿಚಾರಗಳಿಗೆ ಸಂಬಂಧಿಸಿದಂತೆ ವೈಧ್ಯರು, ವಕೀಲರು, ನ್ಯಾಯಾಧೀಶರು ಇರುವ ಸಲಹಾ ಕೇಂದ್ರಗಳು, ವಿಚಾರಣಾ ಕಮಿಟಿಗಳು ಅವಶ್ಯವಾಗಿರುತ್ತವೆ. ಸುಳ್ಳು ದೂರುಗಳಿಗೆ ಮತ್ತು ಮನೋ ದೌರ್ಬಲ್ಯದ ನಡವಳಿಕೆಗಳಿಗೆ ಸೂಕ್ತ ಮನೋವೈಧ್ಯರಲ್ಲಿ ಚಿಕಿತ್ಸೆಯನ್ನು ಕೊಡಿಸಿ ಸಾಧ್ಯವಾದಷ್ಟು ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಬೇಕಿರುತ್ತದೆ.

MEMBER OF PARLIAMENT FUND MISUTILISED IN TUMKUR

HOW CENTRAL GOVERNMENT FUND IS MISUTILISED BY TUDA

THIS IS THE CONTENT OF NOTICE ISSUED BY ONE OF THE ADVOCATE OF TUMKUR TO DEPUTY COMMISSIONER. NOW MEMBER OF PARLIAMENT SIMPLY BOMBARDS TUDA ENGINEER RATHER THAN TAKING ACTION AGAINST REAL CULPRITS. SHAME ON TUMKUR POLITICS


ಅಮ್ಮಾನಿಕೆರೆ ಸಮಗ್ರ ಅಭಿವೃದ್ದಿ ಯೋಜನೆಯ ಆಡಳಿತಾತ್ಮಕ ಮಂಜೂರಾತಿ ನೀಡಿರುವ ಕೇಂದ್ರ ಸರ್ಕಾರದ NRCD ವತಿಯಿಂದ ದಿನಾಂಕ ೨೬-೦೯-೨೦೦೮ ರ ಪತ್ರದಂತೆ ಹಾಕಿರುವ ಷರತ್ತುಗಳನ್ನು ಪಾಲನೆ ಮಾಡದೆ ಶ್ರೀಯುತ ಆಧರ್ಶಕುಮಾರ್ ಆಯುಕ್ತರು ನಗರಾಭಿವೃದ್ದಿ ಪ್ರಾಧಿಕಾರ ರವರು ಕರ್ತವ್ಯ ಚ್ಯುತಿ ಮತ್ತು ಮಾರ್ಗದರ್ಶನ ಉಲ್ಲಂಘನೆ ಮತ್ತು ಹಣಕಾಸು ವಿಚಾರದಲ್ಲಿ ತೆಗೆದುಕೊಳ್ಳಬೇಕಾದ ಜಾಗ್ರತೆ ಮತ್ತು ಪಾರದರ್ಶಕತೆ ಇಲ್ಲದೆ ತಮ್ಮ ಮನಸೋ ಇಚ್ಚೆ ನಗರಸಭೆ ಮತ್ತು ನಗರಾಭಿವೃದ್ದಿ ಆಡಳಿತವನ್ನು ರಾಜಕೀಯ ದೊಂಬರಾಟಕ್ಕೆ ದಾಳವಾಗಿಸಿದ್ದಾರೆ.

೧. ಅಮ್ಮಾನಿಕೆರೆ ಸಮಗ್ರ ಅಭಿವೃದ್ದಿ ಯೋಜನೆಯ ಆಡಳಿತಾತ್ಮಕ ಮಂಜೂರಾತಿ ನೀಡಿರುವ ಕೇಂದ್ರ ಸರ್ಕಾರದ NRCD ವತಿಯಿಂದ ದಿನಾಂಕ ೨೬-೦೯-೨೦೦೮ ರ ಪತ್ರದಂತೆ ಹಾಕಿರುವ ೪.೧ (iv), ರಲ್ಲಿನ ಷರತ್ತಿನಂತೆ, ನಗರಾಭಿವೃದ್ದಿ ಪ್ರಾಧಿಕಾರ ಮತ್ತು ತುಮಕೂರು ನಗರಸಭೆ ವತಿಯಿಂದ ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ ಯ ಬಗ್ಗೆ ದಿನಾಂಕ ೨೬-೦೯-೨೦೦೮ ರಿಂದ ಇಲ್ಲಿವರೆಗೆ ಯಾವುದೇ ಸಮರ್ಪಕ ಕಾರ್ಯ ಕೈಗೊಳ್ಳದೆ ಇರುವುದು.

೨. ಅಮ್ಮಾನಿಕೆರೆ ಸಮಗ್ರ ಅಭಿವೃದ್ದಿ ಯೋಜನೆಯ ಆಡಳಿತಾತ್ಮಕ ಮಂಜೂರಾತಿ ನೀಡಿರುವ ಕೇಂದ್ರ ಸರ್ಕಾರದ NRCD ವತಿಯಿಂದ ದಿನಾಂಕ ೨೬-೦೯-೨೦೦೮ ರ ಪತ್ರದಂತೆ ಹಾಕಿರುವ ಷರತ್ತಿನಂತೆ, ಮಾಸಿಕ ವೆಚ್ಚ ಮಾಡಿರುವ ಮತ್ತು ಅದನ್ನು ಕೇಂದ್ರ ಸರ್ಕಾರದ ಎನ್.ಸಿ.ಆರ್.ಡಿ ರವರಿಗೆ ನಿರ್ದಿಷ್ಟ ನಮೂನೆಯಲ್ಲಿ ವರದಿ ಸಲ್ಲಿಸಲು, ಬಳಕೆ ಪ್ರಮಾಣಪತ್ರ ಸಲ್ಲಿಸಲು, ಪಿ.ಪಿ.ಆರ್ ವರದಿಗಳ ಸಲ್ಲಿಸಲು, ಕಾರ್ಯಪಾಲಕ ಅಭಿಯಂತರರ ನಿಯೋಜನೆ ಮಾಡದಿರುವುದು.

೩. ಅಮ್ಮಾನಿಕೆರೆ ಸಮಗ್ರ ಅಭಿವೃದ್ದಿ ಯೋಜನೆಯ ಆಡಳಿತಾತ್ಮಕ ಮಂಜೂರಾತಿ ನೀಡಿರುವ ಕೇಂದ್ರ ಸರ್ಕಾರದ NRCD ವತಿಯಿಂದ ದಿನಾಂಕ ೨೬-೦೯-೨೦೦೮ ರ ಪತ್ರದಂತೆ ಹಾಕಿರುವ ೪.೫ (b), ರಲ್ಲಿನ ಷರತ್ತಿನಂತೆ, ವಿವಿದ ಇಲಾಖೆಯ ಸಮನ್ವಯ ಸಮಿತಿಯನ್ನು ರಚಿಸದೆ ಮುಂದಾಗಿರುವುದು

೪. ಅಮ್ಮಾನಿಕೆರೆ ಸಮಗ್ರ ಅಭಿವೃದ್ದಿ ಯೋಜನೆಯ ಆಡಳಿತಾತ್ಮಕ ಮಂಜೂರಾತಿ ನೀಡಿರುವ ಕೇಂದ್ರ ಸರ್ಕಾರದ NRCD ವತಿಯಿಂದ ದಿನಾಂಕ ೨೬-೦೯-೨೦೦೮ ರ ಪತ್ರದಂತೆ ಹಾಕಿರುವ ೪.೫ (ಛಿ), ರಲ್ಲಿನ ಷರತ್ತಿನಂತೆ, ಸ್ಥಳೀಯ ಸಂಸ್ಥೆಗಳ ಸಿ.ಇ.ಓ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸದೆ ಮುಂದಾಗಿರುವುದು.

೫. ಅಮ್ಮಾನಿಕೆರೆ ಸಮಗ್ರ ಅಭಿವೃದ್ದಿ ಯೋಜನೆಯ ಆಡಳಿತಾತ್ಮಕ ಮಂಜೂರಾತಿ ನೀಡಿರುವ ಕೇಂದ್ರ ಸರ್ಕಾರದ NRCD ವತಿಯಿಂದ ದಿನಾಂಕ ೨೬-೦೯-೨೦೦೮ ರ ಪತ್ರದಂತೆ ಹಾಕಿರುವ ೪.೭ (b), ರಲ್ಲಿನ ಷರತ್ತಿನಂತೆ, ಸ್ಥಳೀಯ ಜನರನ್ನು ಒಳಗೊಂಡಂತೆ ಯೋಜನೆಯ ಕಾರ್ಯಗತಕ್ಕೆ ಯಾವ ರೀತಿಯಲ್ಲಿ ಸಮಿತಿ ರಚಿಸದೆ ಸಾರ್ವಜನಿಕರನ್ನು ಅಂದಕಾರದಲ್ಲಿ ಇಟ್ಟಿರುವುದು.

೬. ಕರ್ನಾಟಕ ರಾಜ್ಯ ಆದೇಶ ಸಂಕ್ಯೆ ಎಫ್.ಇ.ಇ ೧೪೯ ಇಸಿಒ ೨೦೦೩, ಬೆಂಗಳೂರು ದಿ: ೨೫-೦೨-೨೦೦೯, ಕೆರೆ ಅಭಿವೃದ್ದಿ ಪ್ರಾಧಿಕಾರವು ಟೆಂಡರ್ ಪ್ರಕ್ರಿಯೆಯನ್ನು ಅನುಮೋದನೆ ಪಡೆಯದೆ ಟೆಂಡರ್ ಕಾಮಗಾರಿಯನ್ನು ಕರೆದಿರುವುದು.

೭. ಕೆರೆಯ ಒತ್ತುವರಿಯನ್ನು ತೆರವು ಗೊಳಿಸದೆ ಒತ್ತುವರಿದಾರರಿಗೆ ಸುಮಾರು ೧೦೦ ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಕೆರೆಯ ಪೂರ್ವ ಆಗ್ನೇಯ ದಿಕ್ಕಿನಿಂದ ಉತ್ತರ ವಾಯುವ್ಯ ದಿಕ್ಕಿನವರೆಗೆ ಸರಿಯಾಗಿ ಮಾಪನ ಮಾಡದೆ ಒತ್ತುವರಿಯನ್ನು ಹಾಗೆ ಬಿಟ್ಟಿರುವುದು, ಬ್ರಷ್ಟ ಹಿತಾಸಕ್ತಿಯಲ್ಲಿ ಕೃತಕ ಬಂಡು ನಿರ್ಮಾಣ ಮಾಡಿ ಒತ್ತುವರಿದಾರರ ಜೊತೆಯಲ್ಲಿ ಷಾಮೀಲಾಗಿರುವುದು.

೮. ಕೆರೆಯ ಒಳಗಡೆ ಪಾರ್ಕು ಮತ್ತು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವುದು. ಕೆರೆಯ ಅಂತರ್ಜಲ ನಗರದ ಬಾಗಗಳಿಗೆ ಹರಿಯದಂತೆ ಪಾರ್ಕು ಮತ್ತು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಮತ್ತು ಕೆರೆಯ ಜಾಗದಲ್ಲಿ ಕಾಂಕ್ರಿಟ್ ಕಾಅಮಗಾರಿ ಮಾದಲು ಮುಂದಾಗಿರುವುದು.

೯. ಕೆರೆಯ ಪಲವತ್ತಾದ ಮಣ್ಣನ್ನು ಲೆಕ್ಕವಿಡದೆ ರೈತರಿಗೆ ಮಾರಿಕೊಂಡಿರುವುದು.

೧೦. ಕೆರೆಯ ಒಳಹರಿವು ಮತ್ತು ಹೊರಹರಿವು ರಾಯಗಾಲುವೆಯನ್ನು ತೆರವುಗೊಳಿಸದೆ ಇರುವುದು.

೧೧. ಕೆರೆಯ ಪಕ್ಕದಲ್ಲಿರುವ ಸರ್ಕಾರಿ ಜಮೀನನ್ನು ಮತ್ತು ಬಹಳ ವರ್ಷಗಳಿಂದ ವ್ಯವಸಾಯ ಮಾಡದೆ ಇರುವ ಜಮೀನುಗಳನ್ನು ಮುಟ್ಟುಗೋಲು ಹಾಕಿ ಕೊಳ್ಳದೆ, ರಿಯಲ್ ಎಸ್ಟೇಟ್ ದಂದೆ ಕೋರರ ಜೊತೆ ಶಾಮೀಲಾಗಿರುವುದು.

೧೨. ನಗರಾಭಿವೃದ್ದಿ ಮತ್ತು ನಗರಪಾಲಿಕೆ ಆಡಳಿತದ ಬಗ್ಗೆ ಅನುಬವವಿಲ್ಲದೆ, ಅದರ ನಿರ್ವಹಣೆ ಬಗ್ಗೆ ತರಬೇತಿ ಇಲ್ಲದೆ, ಕೋಟ್ಯಾಂತರ ರೂ ರಸ್ತೆ ಕಾಮಗಾರಿ ಮತ್ತು ಕೆರೆ ಅಭಿವೃದ್ದಿ ಮತ್ತು ರೈತರ ಸಹಯೋಗದಲ್ಲಿ ಅಮ್ಮಾನಿಕೆರೆ ಅಚ್ಚುಕಟ್ಟಿನಲ್ಲಿ ರಿಯಲ್ ಎಸ್ಟೇಟ್ ದಂದೆ ಮಾಡಲು ಮುಂದಾಗಿರುವ ಕೈಗೊಂಬೆಯಂತೆ ಲಿಂಗಾಯತರಲ್ಲಿಯೇ ಇಬ್ಬಾಗವಾಗುಂತ ನೊಣಬ, ಗೌಡ, ಅರಾಧ್ಯ ಎಂಬ ರಾಜಕಾರಣವನ್ನು ಮಾಡುತ್ತಿರುವ ಆಧರ್ಶಕುಮಾರ್ ರವರನ್ನು ತುಮಕೂರು ಜಿಲ್ಲೆಯಿಂದಲೇ ಗಡಿಪಾರು ಮಾಡಲು ಮನವಿ.

೧೩. ಎಲ್ಲಾ ವಿಚಾರಕ್ಕೂ ಯಾವುದಕ್ಕೂ ಬೇಟಿ ಮಾಡಿ ಎಂದು ರಾಜಾರೋಷವಾಗಿ ಹೇಳಿ ವಸೂಲಿ ದಂದೆಯಲ್ಲಿ ನಿರತನಾಗಿರುವ ಈ ವ್ಯಕ್ತಿ ಬಿಟ್ಟರೆ ಸರ್ಕಾರಕ್ಕೆ ಬೇರೆ ಅಧಿಕಾರಿಗಳ ಗತಿಯಿಲ್ಲದಂತೆ ಈ ವ್ಯಕ್ತಿಯನ್ನೇ ಸದರಿ ಸ್ಥಳದಲ್ಲಿ ಮುಂದುವರಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ, ಮತ್ತು ಸರ್ಕಾರಿ ಸೌಲಭ್ಯಗಳನ್ನು ಹಗಲು ದಾರೋಡೆ ಮಾಡುವ ಪ್ರವೃತ್ತಿಯನ್ನು ಪ್ರಧರ್ಶಿಸಿದಂತೆ ಆಗಿದೆ. ಪೆನ್ನಿನ ಬರಹದ ಮೂಲಕ ಅರಿಕೆ ಮಾಡಿಕೊಳ್ಳುತ್ತಿದ್ದೇನೆ, ಮುಂದೆ ನಮ್ಮ ಯುವ ಪೀಳಿಗೆ ಅಧಿಕಾರಿಗಳನ್ನು ಮತ್ತು ರಾಜಕಾರಣಿಗಳನ್ನು ಗನ್ನಿನಿಂದ ಮಾತನಾಡಿಸುವವರೆಗೆ ಮೌನವಾಗಿರದೆ ಜಾಗ್ರತೆ ವಹಿಸಲು ಮನವಿ.

೧೪. ಟೂಡಾ ಅಧ್ಯಕ್ಷನಾಗಿರುವ ಶ್ರೀಧರಮೂರ್ತಿ ಎಂಬುವವರು ವೈಶ್ಯ ಕೋಆಪರೇಟೀವ್ ಭ್ಯಾಂಕಿನಲ್ಲಿ ಫ್ರಾಡ್ ಮಾಡಿ ಕಾನೂನು ಉಲ್ಲಂಘಿಸಿ ರಿಯಲ್ ಎಸ್ಟೇಟ್ ದಂದೆಗೆ ಸಾರ್ವಜನಿಕ ಹಣವನ್ನು ಪೋಲು ಮಾಡಿರುವ ನಿರ್ದರ್ಶನಗಳು ಇವೆ, ಈ ಬಗ್ಗೆ ಫ್ರಾಡ್ ಸೆಲ್ ಮತ್ತು ತುಮಕೂರು ಸಹಕಾರಿ ನೊಂದಾವಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ, ಪ್ರಕರಣ ವಿಚಾರಣೆಯಲ್ಲಿದೆ. ಮೇಲ್ನೋಟಕ್ಕೆ ಆರೋಪವು ರಿಜರ್ವ ಬ್ಯಾಂಕ್ ನಿಯಮ ಉಲ್ಲಂಘನೆಯ ಬಗ್ಗೆ ರುಜುವಾತಿರುವುದರಿಂದ ಇಂತಹ ಸಮಾಜ ಘಾತುಕ ಶಕ್ತಿಗಳನ್ನು ಹಗಲು ಕಳ್ಲರ ಕೂಟದವರನ್ನು ಮಹತ್ವದ ಯೋಜನೆಯ ಕಾರ್ಯಗತ ಮಾಡುವ ಉಸ್ತುವಾರಿ ನೀಡಿರುವುದು, ತಮ್ಮ ಘನತೆಗೆ ಮತ್ತು ತಮ್ಮ ಸಂವಿಧಾನಾತ್ಮಕ ಪ್ರಮಾಣೀಕೃತ ಹುದ್ದೆಗೆ ಶೋಬೆತರುವಂತಹದ್ದಲ್ಲವೆಂದು ಈ ಮೂಲಕ ನೊಂದು ತಮ್ಮ ನಿಷ್ಕ್ರಿಯ ಪ್ರತಿಕ್ರಿಯೆಗಳಿಗೆ ಬೇಸತ್ತು ಈ ಕಟ್ಟಕಡೆಯ ನೋಟೀಸು ನೀಡಿರುತ್ತೇನೆ.

ರಾಜಿಗೆ ಒಪ್ಪದ ಗೌರಿಶಂಕರ ಸ್ವಾಮೀಜಿಯ ಮೇಲೆ ರಾಜಿ ನಾಟಕ ಆಡಿಸುತ್ತಿರುವ ವ್ಯಕ್ತಿ ಯಾರು?

ಇತ್ತೀಚೆಗೆ ಶ್ರೀ ಶಿವಕುಮಾರಸ್ವಾಮೀಜಿ ಮತ್ತು ಗೌರಿಶಂಕರಸ್ವಾಮೀಜಿ ರಾಜಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯನ್ನು ಮಾದ್ಯಮದಲ್ಲಿ ಹರಿದು ಬಿಡಲಾಗಿತ್ತು. ರಾಜಿಗೆ ಎಂದು ಗೌರಿಶಂಕರರಿಗೆ ತಿಳಿಸದೆ ಅವರ ವಕೀಲರೂ ಶಾಮೀಲಾಗಿ ಈ ರಾಜೀ ಸಂದಾನದಲ್ಲಿ ಫ಼ೋಟೋ ಸೆಷನ್ ನಡೆಸಿರುತ್ತಾರೆ ಎನ್ನಲಾಗಿದೆ. ಇದರ ಹಿಂದಿನ ರಹಸ್ಯವೇನು?
೧. ಗೌರಿಶಂಕರರು ಕ್ಷೇಮವೇ?
೨. ಗೌರಿಶಂಕರರ ಹತ್ಯಾ ಪ್ರಯತ್ನಕ್ಕೆ ಹಿರಿಯರ  ಸುತ್ತಲಿನವರ ಸಂಚಿದೆ ಎನ್ನುತ್ತಾರೆ  ನಿಜವೆ?
೩. ಶ್ರೀ ಮಠದಲ್ಲಿರುವ ಬ್ಲಾಕ್ ಮನಿ ಕಾಯುವುದಕ್ಕೆ ಇಲ್ಲಿ ಹೆಚ್ಚಿನ ರಾಜಕಾರಣ ನಡೆಯುತ್ತಿದೆ ಎನ್ನಲಾಗಿದೆ ನಿಜವೆ?ಏನಿದು ತುಮಕೂರಿನ ಪಾಂಪ್ಲೆಟ್ ರಾಜಕಾರಣ?